ಗೇಮ್ ಆಫ್ ಥ್ರೋನ್ಸ್ ಎನ್ನುವುದು ಡೇವಿಡ್ ಬೆನಿಯಾಫ್, ಡಿ ಬಿ ವೇಯ್ಸ್ ರಚಿಸಿದ ಅಮೇರಿಕದ ಕಾಲ್ಪನಿಕ ನಾಟಕ ಟಿವಿ ಸರಣಿ. ಜಾರ್ಜ್ ಆರ್ ಆರ್ ಮಾರ್ಟಿನ್ ಬರೆದ ಕಾದಂಬರಿ ಎ ಸಾಂಗ್ ಆಫ್ ಐಸ್ ಎಂಡ್ ಫೈರ್ ಈ ದೂರದರ್ಶನ ದಾರಾವಾಹಿಯ ಆಧಾರ. ಇದನ್ನು ಯುನೈಟೆಡ್ ಕಿಂಗ್ಡಮ್, ಕೆನಡಾ, ಕ್ರೊಯೇಷಿಯಾ, ಐಸ್ಲ್ಯಾಂಡ್, ಮಾಲ್ಟಾ, ಮೊರಾಕೊ, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ಟೈಟಾನಿಕ್ ಸ್ಟುಡಿಯೋಸ್ನಲ್ಲಿ ಚಿತ್ರೀಕರಿಸಲಾಯಿತು. ಅಮೇರಿಕಾದಾದ್ಯಂತ ಸರಣಿ ಹೆಚ್ ಬಿ ಓ ಚಾನೆಲ್ನಲ್ಲಿ ಏಪ್ರಿಲ್ 17, 2011 ರಂದು ಪ್ರಸಾರ ಮಾಡಲು ಪ್ರಾರಂಭಿಸಿತು ಮತ್ತು ಆರನೇ ಋತುವನ್ನು ಜೂನ್ 26, 2016 ರಂದು ಕೊನೆಗೊಳಿಸಿತು. ಸರಣಿಯ 7 ನೇ ಋತು, ಜುಲೈ 16, 2017 ರಂದು ಪ್ರಸಾರವಾಯಿತು, 2019 ರ ಎಪ್ರಿಲ್ ೧೪ರಿಂದ ಎಂಟನೇ ಋತು ಪ್ರಸಾರವಾಯಿತು. ವೆಸ್ಟೆರೋಸ್, ಎಸ್ಸೋಸ್ ಕಾಲ್ಪನಿಕ ಭೂಖಂಡದಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನದ ಅಧಿಕಾರಕ್ಕೆ ಹಾತೊರೆಯುವ ರಾಜರು ಈ ನಾಟಕದ ಕಥೆ, ಹಲವು ವಿಭಿನ್ನ ಕಥಾ ರೇಖೆಗಳು ಮತ್ತು ಹಲವು ಪಾತ್ರಗಳನ್ನು ಹೊಂದಿದೆ. ಸಿಂಹಾಸನದಿಂದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡುವ , ಸಾರ್ವಭೌಮತ್ವದೊಂದಿಗೆ ಏಳು ರಾಜರುಗಳ (ಐರನ್ ಥ್ರೋನ್) ಸಿಂಹಾಸನಕ್ಕಾಗಿ ವಾದಿಸುವುದು ಮೊದಲ ಕಥಾಭಾಗವಾದರೆ, ನಂತರದ ಕಥಾಭಾಗದಲ್ಲಿ, ಸಿಂಹಾಸನದಿಂದ ಭ್ರಷ್ಟಗೊಂಡಿದ್ದ ಹಿಂದಿನ ರಾಜವಂಶದ ವಂಶಸ್ಥರು, ಗಡಿಪಾರುಗಳಲ್ಲಿ ಬದುಕಿ ಸಿಂಹಾಸನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದ ಅಭಿನಯ, ನಟನೆ, ಸಂಕೀರ್ಣವಾದ ಪಾತ್ರಗಳು, ಕಥೆಯಿಂದ ಬಹಳ ಪ್ರಸಿದ್ದಿಯಾಗಿದ್ದರೂ, ಚಿತ್ರೀಕರಣದ ವೆಚ್ಚಗಳು , ಮತ್ತೊಂದೆಡೆ ಸರಣಿಯಲ್ಲಿ ನಗ್ನತೆ ಮತ್ತು ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ ) ಚಿತ್ರಿಸಲಾಗಿರುವುದರಿಂದ ಟೀಕಿಸಲಾಗಿದೆ. [೧] == ಹಿನ್ನೆಲೆ == === ಕಾಲ್ಪನಿಕ ಪ್ರಪಂಚ === ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಸರಣಿಯಲ್ಲಿನ ಕಾಲ್ಪನಿಕ ವೆಸ್ಟೆರೋಸ್ ಖಂಡದ ಏಳು ಸಾಮ್ರಾಜ್ಯಗಳು ಈ ದೂರದರ್ಶನ ಸರಣಿಯ ಆಟದ ಕಥೆಯ ಆಧಾರವಾಗಿದೆ.ಈ ಸರಣಿಯು ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕುಟುಂಬಗಳ ನಡುವೆ ಸಿಂಹಾಸನಕ್ಕಾಗಿ ಹೋರಾಡುವುದನ್ನು ಚಿತ್ರಿಸುತ್ತದೆ. ಸರಣಿಯು ವೆಸ್ಟರೋಸ್ ಮತ್ತು ಎಸ್ಸೊಸ್ ಎಂಬ ಎರಡು ಖಂಡಗಳಲ್ಲಿ ಕೆಲವು ರಾಜರು ಮತ್ತು ರಾಣಿಯರ ಮೇಲೆ ಕೇಂದ್ರೀಕರಿಸುತ್ತದೆ . ಸಿಂಹಾಸನಕ್ಕೆ ಉತ್ತರಾಧಿಕಾರಿ ಆಗಬೇಕೆಂದು ಅಧಿಕಾರಕ್ಕಾಗಿ ಹೋರಾಡುತ್ತಾರೆ. ಅತ್ಯಂತ ಪ್ರಮುಖವಾದುದು ಲ್ಯಾನಿಸ್ಟರ್ , ಟಾರ್ಗೇರಿಯನ್ ಮತ್ತು ಸ್ಟಾರ್ಕ್ ಕುಟುಂಬಗಳು. ==== ಪಾತ್ರ ವರ್ಗ ==== ಜಾನ್ ಸ್ನೋ ಪಾತ್ರದಲ್ಲಿ ಕಿಟ್ ಹ್ಯಾರಿ೦ಗ್ಟನ್ ಸಾನ್ಸ ಸ್ಟಾರ್ಕ್ ಪಾತ್ರದಲ್ಲಿ ಸೋಫಿ ಟರ್ನರ್ ಟಿರಿಯನ್ ಲ್ಯಾನಿಸ್ಟರ್ ಪಾತ್ರದಲ್ಲಿ ಪೀಟರ್ ಡಿ೦ಕ್ಲೇಜ್ ಡನೇರಿಸ್ ಟಾರ್ಗೇರಿಯನ್ ಪಾತ್ರದಲ್ಲಿ ಎಮಿಲಿಯಾ ಕ್ಲಾರ್ಕ್ ಸೆರ್ಸಿ ಲಾನಿಸ್ಟರ್- ಲೀನಾ ಹೀಡೀ ಗೇಮ್ ಆಫ್ ಥ್ರೋನ್ಸ್ ಪಾತ್ರವರ್ಗ